ಪಂಚಗೋತ್ರಗಳು -
ವೈದಿಕ ಧರ್ಮದಲ್ಲಿ ಋಷಿಗೋತ್ರವನ್ನು ಹೇಳುವಂತೆ ವೀರಶೈವರಲ್ಲಿ ಐವರು ಪ್ರಮಥರ ಗೋತ್ರಗಳನ್ನು ಹೇಳುತ್ತಾರೆ. ವೀರಭದ್ರ, ನಂದೀಶ್ವರ, ಭೃಂಗೀಶ್ವರ, ವೃಷಭನಾಥ ಮತ್ತು ಸ್ಕಂದಸ್ವಾಮಿ ಇವರೇ ಆ ಐವರು ಮೂಲಪುರುಷರು. ಕೈಲಾಸದ ಪ್ರಮಥರಾದ ಇವರು ಶೈವಧರ್ಮಕ್ಕೂ ವೀರಶೈವಮತಕ್ಕೂ ಮೂಲಪುರುಷರೆಂದು ಭಾವಿಸಲಾಗಿದೆ. ಇವರ ಪರಂಪರೆಗೆ ಸೇರಿದ ಸೃಷ್ಟಿಯನ್ನು ವೀರಶೈವ ಗ್ರಂಥದಲ್ಲಿ ಅಪ್ರಾಕೃತ ಸೃಷ್ಟಿ ಎಂದು ಕರೆದಿದೆ.					(ಬಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ